Pages

Thursday, April 24, 2008

ಓ ನನ್ನ ಮನವೇ ಏನಾದೆ ನೀನು....

ಚಿತ್ರ: ಮೊಗ್ಗಿನ ಮನಸ್ಸು
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್'


ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಕಂಗಳಲ್ಲಿ ನೀರಾದೆಯೇನು
ಒಂದು ನಿಜವೇ ಸುಳ್ಲಾಗದೆನು
ಎದೆ ಬಿರಿಯೋ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೇನು
ನನ್ನ ಮನವೇ ಮಾತಾಡೆಯೇನು

ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ
ಭಾವಗಳೇ ಅದಲು ಬದಲಾಯಿತೇಕೆ
ನನ್ನ ಮನವೇ ಮಾತಾಡೆಯೇನು

ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
ನನ್ನ ಮನವೇ ಮಾತಾಡೆಯೇನು

ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಕಂಗಳಲ್ಲಿ ನೀರಾದೆಯೇನು
ಒಂದು ನಿಜವೇ ಸುಳ್ಲಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ
ಸಮಯ ಹಿಂದಿರುಗದೇನು
ನನ್ನ ಮನವೇ ಮಾತಾಡೆಯೇನು

ಅರಳುತಿರು ಜೀವದ ಗೆಳೆಯ....

ಚಿತ್ರ: ಮುಂಗಾರು ಮಳೆ
ಸಂಗೀತ: ಮನೋಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಿಣಿ


ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ ಪ್ರೇಮದಾ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನ ವೀಣೆ..
ಹೀಗೆ ಸುಮ್ಮನೆ.....

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಹೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ ಹೆಸರು..
ಯಾಕೆ ಸುಮ್ಮನೆ.....

ಮಾತಿಗೆ ಮೀರಿದ ಭಾವದ ಸೆಳೆತವೇ ಸುಂದರ
ಒಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರು ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲ್ಲಿ ನಿನ್ನನು
ಇರಲಿ ಗೆಳೆಯ ಈ ಅನುಬಂಧ
ಹೀಗೆ ಸುಮ್ಮನೆ.....

ಒಂದೇ ಸಮನೆ ನಿಟ್ಟುಸಿರು....

ಚಿತ್ರ: ಗಾಳಿಪಟ
ಸಂಗೀತ: ವಿ ಹರಿಕೃಷ್ಣ
ಹಾಡಿದವರು: ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ


ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಲೆಬಿಲ್ಲಿನಂತೆ ನೋವು
ಗುರಿಯಿರದ ಏಕಾಂತವೆ ಒಲವೆ...

ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣಾ ಹನಿ ಸುಮ್ಮನೆ ಒಣಗಿ
ಅವಳನ್ನು ಜಪಿಸುವುದೇ ಒಲವೆ...

ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ
ಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವಾ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೆ....

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಚಿತ್ರ: ಮುಂಗಾರು ಮಳೆ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ ಧರೆಯ ಕೊರಳ ಪ್ರೇಮದಮಾಲೆ
ಸುರಿವ ಒಲುಮೆಯ ಜಡಿಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿ ಒಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿಸದ್ದು ಪ್ರೇಮನಾದವೋ....
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ..
ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ....

Sunday, April 20, 2008

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ

ಚಿತ್ರ: ಮಿಲನ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ


ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಮೂಡಿದೆ
ಹೇಳುವುದು ಏನೋ ಉಳಿದುಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ

ನೋವಿನಲ್ಲಿ ಜೀವ ಜೀವ ಅರಿತಾನಂತರ
ನಲಿವು ಬೇರೆ ಏನಿದೆ ಪ್ರೀತಿ ಅಂತರ
ನಿನ್ನ ಹಾಡಿನಲ್ಲಿ ಇಂದು ಬೇರೆವ ಕಾತರ
ಒಂದೇ ಸಾರಿ ನೀ ಕೇಳೆಯ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗನ
ಕೇಳು ಜೀವವೇ ಏತಕೆ ಕಂಪನ
ಹೃದಯವು ಇಲ್ಲೇ ಕಳೆದು ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ

ನೂರು ಜನ್ಮಕು ನೂರಾರು ಜನ್ಮಕು

ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೇ ಒಲಿದೊಲಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು
ನೂರು ಜನ್ಮಕು

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
ನನ್ನೊಳಗೆ ಹಾಡಾಗಿ ಹರಿದವಳೇ

ಬಾ ಮಲ್ಲಿಗೆ ಮಮಕಾರ ಮಾಯೆ ಪನ್ನೀರ ಜೀವ ನದಿ
ಬಾ ಸಂಪಿಗೆ ಸವಿಭಾವ ಲಹರಿ
ಲೋಕದ ಸುಖವೆಲ್ಲ ನಿನಗಾಗಿ ಮುದಿಪಿರಲಿ
ಇರುವಂಥ ನೂರು ಕಹಿ ಚಿರವಿರಲಿ ನನಗಾಗಿ
ಕಾಯುವೇನು ಕೊನೆವರೆಗೂ ಕಣ್ಣಾಗಿ

Saturday, April 5, 2008

ಕೃಷ್ಣಾ ನೀ ಬೇಗನೆ ಬಾರೋ ........

ಚಿತ್ರ: ಪ್ಯಾರಿಸ್ ಪ್ರಣಯ
ಸಂಗೀತ: ಪ್ರಯೋಗ್
ಹಾಡಿದವರು: ನಂದಿತ


ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ರಾಧೆಯ ಕೂಗು, ನೀ ಕೇಳಲಿಲ್ಲವೇನು -2
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ರಾಧೆಯ ಕೂಗು, ನೀ ಕೇಳಲಿಲ್ಲವೇನು -2
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ .....

ಆತ್ಮವು ನೀನೆ, ಜೀವವು ನೀನೆ, ನನ್ನೆದೆ ಹಾಡೇ ನೀನೆ, ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ, ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ.....

ಜನನವು ನೀನೆ, ಮರಣವು ನೀನೆ, ನನ್ನೆದೆ ಧ್ಯಾನವು ನೀನೆ, ಧ್ಯಾನದ ಪ್ರಣತಿಯು ನಾನೇ
ಬೆಳಗುವೆ ದೀಪ, ತೋರಿಸೋ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ರಾಧೆಯ ಕೂಗು, ನೀ ಕೇಳಲಿಲ್ಲವೇನು -
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ...

ನಿರಿರಿನಿ, ರಿರಿ, ರಿನಿನಿರಿನಿ
ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿಸನಿಪ
ನಿಸನಿಸ, ರಿರಿಮ, ಸರಿಸರಿ, ಮಪಮಪ, ರಿಮರಿಮ, ಪನಿಪನಿ, ಮಪಮಪ, ರಿಸರಿ
ರೀನಿ, ರೀಸನಿಸ, ರೀಸನಿಸ, ರೀಸನಿಸ
ರೀಸನಿಸ, ರೀಸನಿಸ, ರೀಸನಿ, ರೀನಿ

ಕನಸೋ ಇದು ನನಸೋ ಇದು .........

ಚಿತ್ರ: ಚೆಲುವಿನ ಚಿತ್ತಾರ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್, ಸುನಿಧಿ ಚೌಹಾನ್

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವಾ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ

ಪ್ರೀತಿ ನೀ ಹುಟ್ಟೊದೆಲ್ಲಿ ನಿನ್ನ ತವರೂರೆಲ್ಲಿ
ನಿನ್ಗೆ ತಾಯ್ತಂದೆ ಯಾರು ನೀ ಹೇಳೆಯಾ
ನಿನಗಿಂತಲು ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿನಗಿಷ್ಟ ಯಾರು ನಿನ್ನ ಕೈಗೊಂಬೆ ಇವರು
ಇವರ ಆಸೆಯ ತುಂಬ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖಸಾಗರ

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ

ಪ್ರೀತಿ ಹೃದಯಗಳನ್ನು ನೀನು ಆವರಸಿಕೊಂಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರೂ ಮತಿಹೀನರು
ನಿನ್ನ ಮುಷ್ಟಿಗೆ ಇಲ್ಲಿ ಶರಣಾದರು
ಪ್ರೀತಿ ಸಂಯಮದಲ್ಲಿ ಇವರ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀನಿಲ್ಲವೇ
ನಿನಗಿಂತಲು ಹಿತಯಾವುದು
ನಿನ್ನಿಂದಲೇ ತಾನೆ ಜಗ ನಲಿವುದು

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವಾ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು

ಈ ಸಂಜೆ ಯಾಕಾಗಿದೆ ....

ಚಿತ್ರ: ಗೆಳೆಯ
ಸಂಗೀತ: ಮನೋಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿದವರು: ಸೋನು ನಿಗಮ್


ಸಂಜೆ ಯಾಕಾಗಿದೆ ನೀನಿಲ್ಲದೆ ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಮೌನ ಬಿಸಿಯಾಗಿದೆ -
ಸಂಜೆ ಯಾಕಾಗಿದೆ ನೀನಿಲ್ಲದೆ ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ ಸಂತೆ ಸಾಕಾಗಿದೆ

ನೋವಿಗೆ ಕಿಡಿ ಸೋಕಿಸಿ ಮಜಾ ನೋಡಿದೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈ ಎಲ್ಲವೂ ಮುಲ್ಲಾಗಿದೆ
ಜೀವ ಕಸಿಯಾಗಿದೆ .....
ಜೀವ ಕಸಿಯಾಗಿದೆ

ಸಂಜೆ ಯಾಕಾಗಿದೆ ನೀನಿಲ್ಲದೆ ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ ಸಂತೆ ಸಾಕಾಗಿದೆ

ನೀನಿಲ್ಲದೆ ಚಂದಿರ ಕಣ್ಣಲಿ ಕಸವಾಗಿದೆ
ಅದ ನೋಡುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶವೇ ಕಳೆಯಾಗಿದೆ
ಸಂಜೆಯ ಕೊಲೆಯಾಗಿದೆ
ಗಾಯ ಹಸಿಯಾಗಿದೆ -

ಸಂಜೆ ಯಾಕಾಗಿದೆ ನೀನಿಲ್ಲದೆ ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ ಸಂತೆ ಸಾಕಾಗಿದೆ

ಜೊತೆಯಲಿ ಜೊತೆ ಜೊತೆಯಲಿ....

ಚಿತ್ರ : ಗೀತ
ಸಂಗೀತ : ಇಳಯರಾಜ
ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ
ಅಅ ಅ ಅ ಎಂಥ ಮಾತಾಡಿದೆ
ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೇ ಹೇಳಿದೆ || ಜೊತೆ ||

ಪ್ರೀತಿ ಎಂದರೇನು ಎಂದು ಈಗ ಅರಿತೆನು || ೨ ||
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ತರುವೆ ನಿನಗೆ ಬಾ ಪ್ರೀತಿ ಕಾಣಿಕೆ || ಜೊತೆ ||

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ || ೨ ||
ಹಾರಾಡುವ ಅರಗಿಣಿಗಳೋ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತಾ ನಾವಾಡುವ
ಹಗಲು ಇರುಳು ಒಂದಾಗಿ ಹಾರುವ || ಜೊತೆ ||

ಅದೇ ಭೂಮಿ ಅದೇ ಭಾನು.....

ಚಿತ್ರ: ಬಂಧನ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್, ಶ್ರೇಯ ಘೋಶಾಲ್

ಅದೇ ಭೂಮಿ ಅದೇ ಭಾನು ನಯನ ನೂತನ
ಅದೇ ದಾರಿ ಅದೇ ತಿರುವು ಪಯಣ ನೂತನ
ನನ್ನ ಮೋಡ ನನ್ನ ಹಾಡು ನನ್ನ ಕನಸೇ ಒಮ್ಮೆ ನೋಡು
ನನ್ನ.... ಚೆಲುವಿನ ನಂದನ... ...
ಏನು ಮಧುರ ಬಂಧನ...

ಉದಯಕಿರಣ ಸೆಳೆದಾಗ ಹೂವಹನಿಯು ಹೊಳೆದಾಗ ಋತುವಿನ ಬಂಧನ
ಹೃದಯ ಕಣ್ಣಲ್ಲಿ ಒಲಿವಾಗ ಬೆರೆತು ಜೀವ ನಲಿವಾಗ ಒಲವಿನ ಬಂಧನ... || ಅದೇ ಭೂಮಿ... ||

ಕನಸಿನ ನೂರು ಎಳೆಯಿಂದ ನೇಯುವ ಗೂಡು ಸಂಬಂಧ ನಲುಮೆಯ ಬಂಧನ
ಯಾರೋ ಕರೆದಂತೆ ದೂರಿಂದ ಗರಿಯ ತೆರೆದಂತ ಮರೆಚಂದ ಗೆಲುವಿನ ಬಂಧನ.... || ಅದೇ ಭೂಮಿ... ||

ನಿನ್ನಿಂದಲೇ ನಿನ್ನಿಂದಲೇ.......

ಚಿತ್ರ: ಮಿಲನ
ಸಂಗೀತ: ಮನೋಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿದವರು: ಸೋನು ನಿಗಮ್

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ...

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿ ಏನು
ಮಾಯೆಗೆ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ...

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ...

ಅನಿಸುತಿದೆ ಯಾಕೋ ಇಂದು..........

ಚಿತ್ರ: ಮುಂಗಾರು ಮಳೆ
ಸಂಗೀತ: ಮನೋಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿದವರು: ಸೋನು ನಿಗಮ್

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ
ಹಾಗೆ ಸುಮ್ಮನೆ....

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲೂ ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ
ಹಾಗೆ ಸುಮ್ಮನೆ....
ಅನಿಸುತಿದೆ ಯಾಕೋ ಇಂದು.....

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ
ಹಾಗೆ ಸುಮ್ಮನೆ..... || ಅನಿಸುತಿದೆ.... ||

ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ

ಚಿತ್ರ: ಆಪ್ತಮಿತ್ರ
ಸಂಗೀತ: ಗುರುಕಿರಣ್


ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

................. ............
................. ...........

ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy
ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ

ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಆಟಕುಂಟು ಲೆಕ್ಕಕಿಲ್ಲ ಅನ್ನೋ ಬಾಳು ಬಾಳೆ ಅಲ್ಲ ನಾಣ್ಣುಡಿ ಚಂದನ
ಬೆಂಕಿಯಲ್ಲಿ ಸರಸ ಬೇಡ, ಸ್ನೇಹದಲ್ಲಿ ವಿರಸ ಬೇಡ ಜಾನ್ನುಡಿ ಚಂದನ
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು ಗಾದೆ ಮಾತೆ ಸೊಗಸು
ಓ.................ಓ ಓ ಓ ಆ............ಅ ಅ ಅ
ಓ.................ಓ ಓ ಓ ಆ.....ಆ..ಆ....


ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be
happy

ನಿ ಸ ಸಾ ಸ ಸ ಸ ನಿ ರಿ ರೀ ರಿ ರಿ ರಿ ಸಾ ನಿ ನಿ ಪ ಪ ಮ ಮ ಪ ಗ ಗ ಮ ದಾ ದ ದ ನಿ ದ ಪಾ ಮ ಗ ಗ..

ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೇ ಗಾದೆಯು ಚಂದನ
ಉಂಡು ಹೋದ ಕೊಂಡು ಹೋದ ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ ಗಾದೆ ಮಾತೆ ಸೊಗಸು
ಓ.................ಓ ಓ ಓ ಆ............ಅ ಅ ಅ
ಓ.................ಓ ಓ ಓ ಆ.....ಆ..ಆ....


ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be
happy
ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ.........

ಚಿತ್ರ: ದಿನಗಳು
ಸಂಗೀತ: ಇಳಯರಾಜ
ಹಾಡಿದವರು: ಇಳಯರಾಜ, ನಂದಿತಾ


ಸಿಹಿಗಾಳಿ
ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು, ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ, ಬರೆಯೋಣ ಬಾ...
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ

ಬಾನಾದಿಗೊಂದು ಸವಿಮಾತು ಕಲಿಸುವ
ವೀಣೆಗೊಂದು ಎದೆರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ....

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು, ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ, ಬರೆಯೋಣ ಬಾ...
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ

ಮಳೆ ನಿಂತು ಹೋದ ಮೇಲೆ.......

ಚಿತ್ರ: ಮಿಲನ
ಸಂಗೀತ: ಮನೋಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿದವರು: ಸೋನು ನಿಗಮ್

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ...
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ....

ನೋವಿನಲ್ಲಿ ಜೀವ ಜೀವ ಅರಿತಾನಂತರ, ನಲಿವು ಬೇರೆ ಏನಿದೆ ಪ್ರೀತಿ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ, ಒಂದೆ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ, ಕೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ....

ಕಣ್ಣು ತೆರೆದು ಕಾಣುವ ಕನಸೇ ಜೀವನ, ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗನ, ಕೇಳು ಜೀವವೇ ಏತಕೆ ಕಂಪನ
ಹೃದಯವು ಇಲ್ಲೇ ಕಳೆದು ಹೋಗಿದೆ, ಹುಡುಕಲೇ ಬೇಕೆ ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ...
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ....

ಮಿಂಚಾಗಿ ನೀನು ಬರಲು ...

ಚಿತ್ರ: ಗಾಳಿಪಟ
ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿದವರು: ಸೋನು ನಿಗಮ್


ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೆಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ....

ನಾ ನಿನ್ನ ಕನಸಿಗೆ ಚಂದದಾರನು
ಚಂದ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ, ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು || ಮಿಂಚಾಗಿ ||

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ತೆರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನದೀ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು || ಮಿಂಚಾಗಿ ||