Pages

Thursday, April 24, 2008

ಓ ನನ್ನ ಮನವೇ ಏನಾದೆ ನೀನು....

ಚಿತ್ರ: ಮೊಗ್ಗಿನ ಮನಸ್ಸು
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್'


ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಕಂಗಳಲ್ಲಿ ನೀರಾದೆಯೇನು
ಒಂದು ನಿಜವೇ ಸುಳ್ಲಾಗದೆನು
ಎದೆ ಬಿರಿಯೋ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೇನು
ನನ್ನ ಮನವೇ ಮಾತಾಡೆಯೇನು

ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ
ಭಾವಗಳೇ ಅದಲು ಬದಲಾಯಿತೇಕೆ
ನನ್ನ ಮನವೇ ಮಾತಾಡೆಯೇನು

ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
ನನ್ನ ಮನವೇ ಮಾತಾಡೆಯೇನು

ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಕಂಗಳಲ್ಲಿ ನೀರಾದೆಯೇನು
ಒಂದು ನಿಜವೇ ಸುಳ್ಲಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ
ಸಮಯ ಹಿಂದಿರುಗದೇನು
ನನ್ನ ಮನವೇ ಮಾತಾಡೆಯೇನು

No comments: